Telegram Join My Telegram WhatsApp Join My WhatsApp

Kichcha Sudeepa: ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೂ ಮೊದಲು ಸುದೀಪ್ ಅಚ್ಚರಿಯ ಪೋಸ್ಟ್! BBK12 ಮುಕ್ತಾಯಕ್ಕೂ ಮುನ್ನ ಕಿಚ್ಚ ಹೇಳಿದ್ದೇನು?

Kichcha Sudeepa: ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೂ ಮೊದಲು ಸುದೀಪ್ ಅಚ್ಚರಿಯ ಪೋಸ್ಟ್! BBK12 ಮುಕ್ತಾಯಕ್ಕೂ ಮುನ್ನ ಕಿಚ್ಚ ಹೇಳಿದ್ದೇನು?

ಬಿಗ್ ಬಾಸ್ (Bigg Boss) ಗ್ರಾಂಡ್ ಫಿನಾಲೆ (Grand Finale) ದಿನವೇ ಕಿಚ್ಚ ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಮೂಲಕ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇಡೀ ಬಿಗ್ ಬಾಸ್‌ಗೆ (Bigg Boss) ದುಡಿದ ಎಲ್ಲಿರೂ ಈಗ ಥ್ಯಾಂಕ್ಸ್ ಹೇಳಿದ್ದಾರೆ. ಸ್ಪರ್ಧಿಗಳಿಗೂ ಧನ್ಯವಾದ ಹೇಳಿದ್ದಾರೆ.
ನೀವೆಲ್ಲ ಇಲ್ಲದ ಇದ್ದರೇ ಬಿಗ್ ಬಾಸ್ ಇಲ್ಲ ಅಂತಲೂ ಹೇಳಿದ್ದಾರೆ. ಕಿಚ್ಚ ಸುದೀಪ್ (Kichcha Sudeepa) ಪೋಸ್ಟ್‌ನ ಇನ್ನಷ್ಟು ಮಾತು ಇಲ್ಲಿದೆ .

ನೀವಿಲ್ಲದೇ ಬಿಗ್ ಬಾಸ್ ಇಲ್ಲ…

ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಪೋಸ್ಟ್ ಹಾಕಿದ್ದಾರೆ. ಬಿಗ್ ಬಾಸ್ ಬಗ್ಗೆ ತಮಗೆ ಅನಿಸಿರೋದನ್ನ ಬರೆದಿದ್ದಾರೆ. ಇಡೀ ಬಿಗ್ ಬಾಸ್‌ಗಾಗಿಯೇ ದುಡಿದವರಿಗೆ ಧನ್ಯವಾದ ಹೇಳಿದ್ದಾರೆ.

ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು

ಇಂದು ಬಿಗ್ ಬಾಸ್ ಸೀಸನ್ -12 ಗ್ರ್ಯಾಂಡ್ ಫಿನಾಲೆ ಇದೆ. ಇದು ನಿಜಕ್ಕೂ ಅದ್ಭುತ ಸೀಸನ್,ವೀಕ್ಷಕರಿಗೆ ,ಇಡೀ ತಂಡಕ್ಕೆ ಧನ್ಯವಾದ ಹೇಳಿಗಳು. ಸೂರ್ಯಾಸ್ತದ ಹೊತ್ತಿಗೆ ಬಿಗ್ ಬಾಸ್ ಸೀಸನ್ -12 ಮುಕ್ತಾಯವಾಗಲಿದೆ. ಈ ಒಂದು ಶೋಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಂತ ಸುದೀಪ್ ಹೇಳಿದ್ದಾರೆ.

ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು

ಬಿಗ್ ಬಾಸ್‌ ಗೆದ್ದ ವಿಜೇತರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ ಅಂತಲೂ ಸುದೀಪ್ ಸೋಷಿಯಲ್ ಮೀಡಿಯಾ ಪೋಸ್ಟ್ ಅಲ್ಲಿ ಹೇಳಿದ್ದಾರೆ.

ನೀವಿಲ್ಲದೇ ಬಿಗ್ ಬಾಸ್ ಇಲ್ಲ…

 

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಸಂಜೆ 6 ಗಂಟೆಗೆ ಶುರು ಆಗುತ್ತದೆ. ಈ ಒಂದು ಫಿನಾಲೆ ಬಗ್ಗೆ ಸಾಕಷ್ಟು ಕುತೂಹಲವೂ ಇದೆ. ಕಾರಣ, ಈಗಾಗಲೇ ಕಿಚ್ಚ ಸುದೀಪ್‌ ವಿನ್ನರ್ ಮತ್ತು ರನ್ನರ್ ಗಳಿಗೆ ಅದೆಷ್ಟು ವೋಟ್ ಬಂದಿವೆ ಅಂತಲೂ ಹೇಳಿದ್ದಾರೆ. ಇದರಿಂದ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

37 ಕೋಟಿ ವೋಟ್ಸ್ ಬಂದಿವೆ

ಬಿಗ್ ಬಾಸ್ ಸೀಸನ್ 12 ಈ ಸಲ ಹೊಸ ದಾಖಲೆಯನ್ನೆ ಮಾಡಿದೆ. ಇಲ್ಲಿವರಗೂ ವಿನ್ನರ್‌ಗೆ ಇಷ್ಟೊಂದು ವೋಟ್ ಬಂದಿರಲಿಲ್ಲ. ಕಳೆದ ಸೀಸನ್-11 ರ ವಿನ್ನರ್ ಸಿಂಗರ್ ಹನುಮಂತ 5 ಕೋಟಿ ವೋಟ್ ಪಡೆದಿದ್ದರು.

ಆದರೆ, ಈ ಸಲದ ವಿನ್ನರ್ 37 ಕೋಟಿ ವೋಟ್ ಪಡೆದಿದ್ದಾರೆ. ಆ ಲಕ್ಕಿ ವಿನ್ನರ್ ಯಾರು ಅನ್ನುವ ಕುತೂಹಲ ಹೆಚ್ಚಾಗಿದೆ. ಈ ಮೂಲಕ ಆ ವಿನ್ನರ್ ತುಂಬಾನೆ ಲಕ್ಕಿ ಅಂತಲೂ ಹೇಳಬಹುದು.

ವಿನ್ನರ್ ಗಿಲ್ಲಿನಾ ಅಶ್ವಿನಿನಾ

ಬಿಗ್ ಬಾಸ್ ವಿನ್ನರ್ ಯಾರು ಅನ್ನುವ ಚರ್ಚೆಗಳು ಶುರು ಆಗಿವೆ. ಗಿಲ್ಲಿ ನಟನ ಗೆಲ್ಲೋದು ಅಂತ ಸಾಕಷ್ಟು ಜನ ಹೇಳ್ತಿದ್ದಾರೆ. ಹಾಗೇನೂ ಇಲ್ಲ ಅಶ್ವಿನಿ ಗೌಡ ಗೆಲ್ಲುತ್ತಾರೆ ಅನ್ನೋದನ್ನು ಇನ್ನು ಕೆಲವರು ಹೇಳ್ತಾರೆ.

ಒಂದು ವೇಳೆ ಗಿಲ್ಲಿ ಗೆಲ್ಲದೆ ಇದ್ದರೆ ಆ ಜಾಗದಲ್ಲಿ ಅಶ್ವಿನಿ ಗೌಡ ಇರ್ತಾರೆ ಅನ್ನೋ ಚರ್ಚೆಗಳು ಇವೆ. ಒಟ್ಟಾರೆ, ಈ ಕಾರಣಕ್ಕೆ ದೊಡ್ಮನೆಯ ಫಿನಾಲೆ ಸಂಚಿಕೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ ಅಂತ ಹೇಳಬಹುದು.

 

ಈ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ kannadiga.online ವೆಬ್ಸೈಟ್ ಗೆ ಭೇಟಿ ನೀಡಿ…

Leave a Comment