ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಕನ್ನಡಿಗ. ಆನ್ಲೈನ್ ವೆಬ್ ಸೈಟ್ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ಸಾಲಿನ ಮುಂಗಾರು ಮಳೆ ಅವಶ್ಯಕತೆಗಿಂತ ಹೆಚ್ಚಾಗಿ ರೈತರಿಗೆ ಸಾಕಷ್ಟು ಬೆಳೆ ಹಾನಿ ಉಂಟು ಮಾಡಿತ್ತು.
Thank you for reading this post, don’t forget to subscribe!…
ಇನ್ನು ಮುಂಗಾರು ಮುಗಿಯಿತೆಂದು ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಹಿಂಗಾರು ಮಳೆ ಕೂಡ ನಿರೀಕ್ಷೆಗಿಂತ ಹೆಚ್ಚಾಗಿ ಸುರಿದು ರಾಜ್ಯದ ರೈತರಿಗೆ ತೀವ್ರ ಸಂಕಷ್ಟ ತಂದಿತು.
ರಾಜ್ಯದಲ್ಲಿ ಹಿಂಗಾರು ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಇದೀಗ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಮಳೆ, ಪ್ರವಾಹ, ಬರ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ರೈತರಿಗೆ ನೀಡುವ ಬೆಳೆ ಹಾನಿ ಪರಿಹಾರ (Bele Parihara) ಹಣವನ್ನು ಸರ್ಕಾರ ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆರಂಭಿಸಿದೆ.
ಇದರಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ಸಾವಿರಾರು ರೈತರಿಗೆ ಇದೀಗ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುವಂತಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳ ರೈತರ ಖಾತೆಗೆ ಹಣ ಜಮಾ ಆಗಿದ್ದು, ಉಳಿದ ರೈತರಿಗೂ ಶೀಘ್ರದಲ್ಲೇ ಹಣ ಜಮಾ ಆಗಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಹಿಂಗಾರು ಬೆಳೆ ಹಾನಿಗೆ ಪರಿಹಾರ
ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಅನೇಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆ, ಪ್ರವಾಹ ಹಾಗೂ ವಿವಿಧ ಕಾರಣಗಳಿಂದ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ನಿರ್ಧಾರ ಕೈಗೊಂಡಿತ್ತು.
ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಉಂಟಾದ ಹಾನಿಯನ್ನು ಪರಿಶೀಲಿಸಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಅರ್ಹ ರೈತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದೀಗ ಆ ಪಟ್ಟಿಯ ಆಧಾರದ ಮೇಲೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ.
ರೈತರಿಗೆ ಎಷ್ಟು ಪರಿಹಾರ ಸಿಗುತ್ತದೆ?
ಬೆಳೆ ಹಾನಿಯ ಪ್ರಮಾಣದ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಹೆಕ್ಟೇರ್ಗೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ಹಣವನ್ನು ನೀಡಲಾಗುತ್ತದೆ. ಬೆಳೆಗಳ ಪ್ರಕಾರ ಮತ್ತು ಹಾನಿಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಮೊತ್ತ ನಿರ್ಧಾರವಾಗುತ್ತದೆ.
ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಕೆಲವು ರೈತರಿಗೆ ಸಾವಿರಾರು ರೂಪಾಯಿಗಳ ಪರಿಹಾರ ಹಣ ಜಮಾ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರಿಗೆ ಹಣ ಜಮಾ ಆಗುವ ಸಾಧ್ಯತೆ ಇದೆ.
ಪರಿಹಾರ ಹಣ ಜಮಾ ಆಗಿದೆಯೇ ಹೇಗೆ ಚೆಕ್ ಮಾಡುವುದು?
ರೈತರು ತಮ್ಮ ಬೆಳೆ ಹಾನಿ ಪರಿಹಾರ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಆನ್ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಸರ್ಕಾರ ಈ ಸೌಲಭ್ಯವನ್ನು ರೈತರಿಗೆ ಒದಗಿಸಿದೆ.
ಸ್ಟೇಟಸ್ ಚೆಕ್ ಮಾಡುವ ವಿಧಾನ
-
ಮೊದಲು ಬೆಳೆ ಪರಿಹಾರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
-
ಅಲ್ಲಿ Bele Parihara Status ಅಥವಾ Payment Status ಆಯ್ಕೆಯನ್ನು ಕ್ಲಿಕ್ ಮಾಡಿ.
-
ನಂತರ ನಿಮ್ಮ ಆಧಾರ್ ಸಂಖ್ಯೆ / ಮೊಬೈಲ್ ಸಂಖ್ಯೆ / ಸರ್ವೇ ನಂಬರ್ ನಮೂದಿಸಿ.
-
Submit ಮಾಡಿದ ನಂತರ ನಿಮ್ಮ ಪರಿಹಾರದ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.
ಈ ಮೂಲಕ ರೈತರು ತಮ್ಮ ಹಣ ಜಮಾ ಆಗಿದೆಯೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಹಣ ಬರದೇ ಇದ್ದರೆ ಏನು ಮಾಡಬೇಕು?
ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಅಥವಾ ದಾಖಲೆಗಳ ಸಮಸ್ಯೆಯಿಂದಾಗಿ ಪರಿಹಾರ ಹಣ ಜಮಾ ಆಗಲು ವಿಳಂಬವಾಗಬಹುದು. ಇಂತಹ ಸಂದರ್ಭದಲ್ಲಿ ರೈತರು ತಮ್ಮ ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಹಾಗೆಯೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಮತ್ತು ಎಲ್ಲಾ ದಾಖಲೆಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದರೆ ಹಣ ಜಮಾ ಆಗಲು ಸಮಸ್ಯೆ ಉಂಟಾಗಬಹುದು.
ರೈತರಿಗೆ ಸರ್ಕಾರದ ನೆರವು
ರೈತರು ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಬೆಳೆ ಹಾನಿ ಪರಿಹಾರವೂ ಅದರಲ್ಲಿ ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯ ಮೂಲಕ ಸಾವಿರಾರು ರೈತರಿಗೆ ಆರ್ಥಿಕ ನೆರವು ದೊರೆಯುತ್ತಿದ್ದು, ರೈತರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತಿದೆ.
ಹೀಗೆ ಅನಿರೀಕ್ಷಿತವಾಗಿ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ ಸಾಕಷ್ಟು ರೈತರ ಬೆಳೆ ಹನಿಗೊಳಗಾಗಿದ್ದರೆ, ಇನ್ನು ಹಲವೆಡೆ ರೈತರು ಸಕಾಲದಲ್ಲಿ ಬೆಳೆ ಕಟಾವು ಮಾಡದ ಕಾರಣ ನಿರೀಕ್ಷೆಗಿಂತ ಕಡಿಮೆ ಇಳುವರಿ ಪಡೆದಿದ್ದಾರೆ.
ಹೀಗೆ ಹಿಂಗಾರು ಮಳೆಯಿಂದ ಬೆಳೆ ಹಾನಿಯಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಇದೀಗ ರಾಜ್ಯ ಸರ್ಕಾರ ಹಿಂಗಾರು ಬೆಳೆಹಾನಿಯಾದ ಅರ್ಹ ರೈತರಿಗೆ ಬೆಳೆ ಹಾನಿ ಪರಿಹಾರ (bele hani Parihara) ನೀಡಲು ಮುಂದಾಗಿದೆ.
ಹಾಗಾದರೆ ಯಾವ ಯಾವ ರೈತರಿಗೆ ಎಷ್ಟು ಪರಿಹಾರ ಹಣ ಜಮಾ ಆಗಲಿದೆ ? ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಹನಿ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಬೆಳೆ ಹಾನಿ ಪರಿಹಾರ ಎಷ್ಟು ಜಮಾ ಆಗಲಿದೆ?
ಹಿಂಗಾರು ಮಳೆಯಿಂದಾಗಿ ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೆಳೆ ಹಾನಿ ಉಂಟಾಗಿದ್ದು, ರಾಜ್ಯ ಸರ್ಕಾರ ಇದೀಗ ಬೆಳೆ ಹಾನಿಯಾದ ಎಲ್ಲಾ ಜಿಲ್ಲೆಗಳ ವರದಿ ಸಂಗ್ರಹಿಸಿದೆ.
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ ಎಲ್ಲಾ ಸಂತ್ರಸ್ತ ತಾಲೂಕುಗಳಿಗೆ ಸುಮಾರು 120 ಕೋಟಿ ರೂಪಾಯಿ ಹಾನಿಯಾಗಿದ್ದು, ಈ ಪರಿಹಾರ (parihara) ಹಣವನ್ನು ರಾಜ್ಯ ಸರ್ಕಾರ ಈಗಾಗಲೇ ಜಮಾ ಮಾಡಿದೆ.
ಅದರಂತೆ ರಾಜ್ಯ ಸರ್ಕಾರ ನೀಡಿರುವ ಪರಿಹಾರ ಹಣವು ಅರ್ಹ ಬೆಳೆ ಹಾನಿಯಾದ ರೈತರಿಗೆ ಮಾತ್ರ ಎಕರೆಗೆ 3480 ರೂಪಾಯಿ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಿದೆ. ಅಲ್ಲದೇ ಈಗಾಗಲೇ ರಾಜ್ಯ ಸರ್ಕಾರ ಅರ್ಹ ರೈತರ ಪಟ್ಟಿಯನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.
ಬೆಳೆ ಹಾನಿಯಾದ ಅರ್ಹ ರೈತರ ಪಟ್ಟಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ:
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service87/
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ , ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ ನಂತರ ವರ್ಷ, ಋತು,ಹಾಗೂ ವಿಪತ್ತಿನ ವಿಧವನ್ನು ನಮೂದಿಸಿ Get Report ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ನಿಮ್ಮ ಗ್ರಾಮದಲ್ಲಿ ಹಿಂಗಾರು ಬೆಳೆ ಹಾನಿಯಾದ ರೈತರ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.
ವಿಶೇಷ ಸೂಚನೆ: ಒಂದು ವೇಳೆ ಮೇಲಿನ ಲಿಂಕ್ ಓಪನ್ ಮಾಡಿದಾಗ No Information Found ಎಂದು ತೋರಿಸಿದರೆ ನಿಮ್ಮ ಗ್ರಾಮ್ ಯಾವುದೇ ಹಿಂಗಾರು ಬೆಳೆ ಹಾನಿಯಾಗಿಲ್ಲ ಎಂದು ಅರ್ಥ. ಒಂದು ವೇಳೆ ಆಗಿದ್ದರೂ ತಾಂತ್ರಿಕ ದೋಷದಿಂದ ಹಾಗೆ ತೋರಿಸುತ್ತದೆ.
ಈ ರೀತಿಯಾಗಿ ನೀವು ಸುಲಭವಾಗಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಿಂಗಾರು ಬೆಳೆ ಹಾನಿಯಾದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು.
ಮುಖ್ಯ ಮಾಹಿತಿ
ಈಗಾಗಲೇ ಕೆಲವು ಜಿಲ್ಲೆಗಳ ರೈತರಿಗೆ ಪರಿಹಾರ ಹಣ ಜಮಾ ಆಗಿದ್ದು, ಉಳಿದ ರೈತರಿಗೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ಜಮಾ ಆಗಲಿದೆ. ಆದ್ದರಿಂದ ರೈತರು ತಮ್ಮ ಖಾತೆಯ ಸ್ಟೇಟಸ್ ಅನ್ನು ಸಮಯ ಸಮಯಕ್ಕೆ ಪರಿಶೀಲಿಸುವುದು ಉತ್ತಮ.
ಓದುಗರಲ್ಲಿ ವಿನಂತಿ,
ಕನ್ನಡಿಗ. ಆನ್ಲೈನ್ ವೆಬ್ಬೆಟ್ಟೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.
WhatsApp ನಲ್ಲಿ Kannadiga.online ಚಾನಲ್ ಫಾಲೋ ಮಾಡಿ: