Telegram Join My Telegram WhatsApp Join My WhatsApp

CSC Aadhaar Operator Recruitment 2026: PUC / Degree ಸಾಕು! ಆಧಾರ್ ಆಪರೇಟರ್ ಆಗಿ ಕೆಲಸ ಮಾಡುವ ಸುವರ್ಣಾವಕಾಶ – ಈಗಲೇ ಅರ್ಜಿ ಹಾಕಿ!

CSC Aadhaar Operator Recruitment 2026: PUC / Degree ಸಾಕು! ಆಧಾರ್ ಆಪರೇಟರ್ ಆಗಿ ಕೆಲಸ ಮಾಡುವ ಸುವರ್ಣಾವಕಾಶ – ಈಗಲೇ ಅರ್ಜಿ ಹಾಕಿ!

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಉತ್ತಮ ಕಂಪ್ಯೂಟರ್ ಜ್ಞಾನವನ್ನು ಹೊಂದಿದ್ದೀರಾ? ಆದರೆ ನಿಮಗೆ ಇನ್ನು ಯಾವುದೇ ಉದ್ಯೋಗ ಸಿಗಲಿಲ್ಲವೇ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ. CSC ಇ-ಗವರ್ನೆನ್ಸ್ ಸಂಸ್ಥೆಯು ಭಾರತದಾದ್ಯಂತ ಇರುವ ಸೇವಾ ಕೇಂದ್ರಗಳಲ್ಲಿ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಉದ್ಯೋಗದ ನೀರಿಕ್ಷೆಯಲ್ಲಿರುವವರಿಗೆ ಇದೊಂದು ಸಂತಸದ ಸುದ್ದಿಯಾಗಿದೆ.

CSC in Kannada

ಜನಸಾಮಾನ್ಯರಿಗೆ ಆಧಾರ್ ಸೇವೆಯನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು 10-03-2026 ಕೊನೆಯ ದಿನಾಂಕವಾಗಿದೆ.

Thank you for reading this post, don’t forget to subscribe!

ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಅಧಿಕೃತ ವೆಬ್ಸೈಟ್ csc.gov.in/ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಹುದ್ದೆಯು ಸರ್ಕಾರಿ ಸಂಬಂಧಿತ ಹುದ್ದೆಯಾಗಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗಿತ್ತದೆ. ನೀವು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾ? ಹಾಗಿದ್ದರೆ ಒಂದೇ ಅರ್ಜಿ ಸಲ್ಲಿಸಿ.

ಈ ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ವಯೋಮಿತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಹುದ್ದೆಯ ವಿವರ ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.

ಹುದ್ದೆಯ ಅವಲೋಕನ:

ಸಂಸ್ಥೆಯ ಹೆಸರು CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್
ಹುದ್ದೆಯ ಹೆಸರು ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ (CSC)
ಹುದ್ದೆಯ ಸಂಖ್ಯೆ ಒಟ್ಟು 252 ಹುದ್ದೆಗಳು
ನೇಮಕಾತಿ ಅಧಿಸೂಚನೆ ಹೊರಡಿಸಿರುವ ಉದ್ದೇಶ ಸಾರ್ವಜನಿಕರಿಗೆ ಆಧಾರ್ ಸಂಬಂಧಿತ ಸೇವೆಯನ್ನು ಸಲಭವಾಗಿ ಒದಗಿಸುವುದು.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಹುದ್ದೆಯ ಕಿರು ಪರಿಚಯ:

ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಗೆ ಸಂಬಂಧಿತ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ದೇಶದಾದ್ಯಂತ ಒಟ್ಟು 252 ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ.

ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಪಿಯುಸಿ ಹಾಗೂ ಪದವಿಯನ್ನು ಹೊಂದಿರುವ ಜೊತೆಗೆ ಉತ್ತಮ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಕನಿಷ್ಠ 18 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಗಳ ವಿವರ:

ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಭಾರತ ದೇಶದಾದ್ಯಂತ ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ರಾಜ್ಯವಾರು ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ರಾಜ್ಯವಾರು ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಉತ್ತರ ಪ್ರದೇಶ 35 ಹುದ್ದೆಗಳು
ಕರ್ನಾಟಕ 34 ಹುದ್ದೆಗಳು
ಮಧ್ಯಪ್ರದೇಶ 27 ಹುದ್ದೆಗಳು
ಮಹಾರಾಷ್ಟ್ರ 25 ಹುದ್ದೆಗಳು
ರಾಜಸ್ತಾನ 18 ಹುದ್ದೆಗಳು
ಕೇರಳ 17 ಹುದ್ದೆಗಳು
ಅಸ್ಸಾಂ 11 ಹುದ್ದೆಗಳು
ಪಂಜಾಬ್ 10 ಹುದ್ದೆಗಳು
ತೆಲಂಗಾಣ 10 ಹುದ್ದೆಗಳು
ಛತ್ತೀಸ್ ಗಢ 09 ಹುದ್ದೆಗಳು
ಆಂಧ್ರಪ್ರದೇಶ 07 ಹುದ್ದೆಗಳು
ಬಿಹಾರ 07 ಹುದ್ದೆಗಳು
ಹರಿಯಾಣ 07 ಹುದ್ದೆಗಳು
ಪಶ್ಚಿಮ ಬಂಗಾಲ 07 ಹುದ್ದೆಗಳು
ಗುಜರಾತ್ 06 ಹುದ್ದೆಗಳು
ಜಾರ್ಖಂಡ್ 05 ಹುದ್ದೆಗಳು
ಉತ್ತರಾಖಂಡ್ 04 ಹುದ್ದೆಗಳು
ತಮಿಳುನಾಡು 03 ಹುದ್ದೆಗಳು
ಒಡಿಶಾ 03 ಹುದ್ದೆಗಳು
ಸಿಕ್ಕಿಂ 02 ಹುದ್ದೆಗಳು
ಚಂಡೀಗಢ 01 ಹುದ್ದೆ
ಹಿಮಾಚನ ಪ್ರದೇಶ 01 ಹುದ್ದೆ
ಮೇಘಾಲಯ 01 ಹುದ್ದೆ
ಮಿಜೋರಾಂ 01 ಹುದ್ದೆ
ನಾಗಾಲ್ಯಾಂಡ್ 01 ಹುದ್ದೆ
ಲಡಾಖ್ 01 ಹುದ್ದೆ
ಪುದಚೇರಿ 01 ಹುದ್ದೆ

ಅರ್ಹತಾ ಮಾನದಂಡ:

ಈ ಕೆಳಗೆ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

ಶೈಕ್ಷಣಿಕ ಅರ್ಹತೆಯ ವಿವರಗಳು:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ ದ್ವಿತೀಯ PUC ಪೂರ್ಣಗೊಳಿಸಿರಬೇಕು.
  • ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು.

ಇತರೆ ಅರ್ಹತೆಗಳು:

  • ಅಭ್ಯರ್ಥಿಗಳು ಮೂಲಭೂತ ಕಂಪ್ಯೂಟರ್ ಕೌಶಲ್ಯವನ್ನು ಹೊಂದಿರಬೇಕು.
  • ಅಭ್ಯರ್ಥಿಗಳಿಗೆ ಆಯಾ ಸ್ಥಳೀಯ ಭಾಷೆಗಳನ್ನು ಓದಲು, ಬರೆಯಲು ಹಾಗೂ ಟೈಪಿಂಗ್ ಮಾಡಲು ತಿಳಿದಿರಬೇಕು.
  • ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
ಇಲ್ಲಿ ಗಮನಿಸಿ: ” ಅಭ್ಯರ್ಥಿಗಳು UIDAI ನಡೆಸುವ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು. ಒಂದು ವೇಳೆ ಈ ಸರ್ಟಿಫಿಕೇಟ್ ಹೊಂದಿಲ್ಲವಾದರೆ, ಆ ಅಭ್ಯರ್ಥಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.”

ವಯೋಮಿತಿ ವಿವರ :

ಅಭ್ಯರ್ಥಿಗಳು ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗೆ ನೀಡಲಾದ ವಯೋಮಿತಿಯನ್ನು ಹೊಂದಿರಬೇಕು. ಅವುಗಳ ವಿವರ ಹೀಗಿದೆ,

  • ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ ಗರಿಷ್ಟ ವಯೋಮಿತಿ ಇರುತ್ತದೆ.

ವಯೋಮಿತಿ ಸಡಿಲಿಕೆ:

ಸರ್ಕಾರದ ಕೆಲವು ನಿಯಮಗಳ ಪ್ರಕಾರ, ಕೆಲವು ವರ್ಗಗಳಿಗೆ ಅನುಗುಣವಾಗಿ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇವುಗಳ ಕುರಿತು ನಿಖರವಾದ ಮಾಹಿತಿ ಬೇಕಿದ್ದರೆ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿ.

ವೇತನ ಶ್ರೇಣಿ:

ಎಲ್ಲಾ ರಾಜ್ಯಗಳಲ್ಲಿ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಸಮಾನವಾದ ವೇತನ ಇರುವುದಿಲ್ಲ ಬದಲಾಗಿ ಆಯಾ ರಾಜ್ಯದ ಕನಿಷ್ಠ ವೇತನ ಆಯೋಗದ ಅನ್ವಯ ನಿರ್ಧಾರವಾಗುತ್ತದೆ. ಅಂದಾಜು ವೇತನ ಎಷ್ಟಿರಬಹುದು ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ.

  • ಆಧಾರ್ ಆಪರೇಟರ್ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ಅಂದಾಜು ₹15,000 ದಿಂದ ₹20,000 ವೇತನವನ್ನು ನೀಡಲಾಗುವುದು.
  • ಸೂಪರ್ವೈಸರ್ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ಅಂದಾಜು ₹20,000 ದಿಂದ ₹25,000 ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಈ ಕೆಳಗಿನ ಮಾನದಂಡಗಳ ಪ್ರಕಾರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅವುಗಳೆಂದರೆ,

1. ದಾಖಲಾತಿ ಪರಿಶೀಲನೆ:

ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಹಾಗೂ UIDAI ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಡೆದುಕೊಂಡ ಆಧಾರ್ ಆಪರೇಟರ್ ಅಥವಾ ಸೂಪರ್ವೈಸರ್ ಪ್ರಮಾಣಪತ್ರವನ್ನು ಪರಿಶೀಲಿಸಲಾಗುತ್ತದೆ. ನಂತರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಸಲಾಗುವುದು.

2. ವೈಯಕ್ತಿಕ ಸಂದರ್ಶನ:

ಈ ಮೇಲೆ ನೀಡಲಾಗಿರುವ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ತಯಾರಿಸಿ ಅವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

3. ಲಿಖಿತ ಹಾಗೂ ಕೌಶಲ್ಯ ಪರೀಕ್ಷೆ:

ಸಂದರ್ಶನ ಮುಗಿದ ನಂತರ, ಅಭ್ಯರ್ಥಿಗಳ ಕಂಪ್ಯೂಟರ್ ಜ್ಞಾನ ಹಾಗೂ ಟೈಪಿಂಗ್ ಟೆಸ್ಟ್ ಹಾಗೂ ಆಧಾರ್ ಸಾಫ್ಟ್ ವೆರ್ ಬಳಸುವ ಕೌಶಲ್ಯಗಳ ಕುರಿತು ಪರೀಕ್ಷೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆನ್ಲೈನ್ ಮೂಲಕ ಸುಲಭವಾಗಿ ಯಾವುದೇ ಹಣವನ್ನು ಪಾವತಿಸದೆ ಅರ್ಜಿ ಸಲ್ಲಿಸಬಹುದು.

ಅರ್ಜಿಸಲ್ಲಿಸುವುದು ಹೇಗೆ?

ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಹಂತಗಳನ್ನು ಫಾಲೋ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • ಮೊದಲನೆಯದಾಗಿ CSC ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಿ.
  • CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ಜಾಬ್ ಪೋರ್ಟಲ್ ಗೆ ಭೇಟಿ ನೀಡಿ.
  • ನಂತರ, ಆಧಾರ್ ಆಪರೇಟರ್ ಅಂಡ್ ಸೂಪರ್ವೈಸರ್ ರಿಕ್ರೂಟ್ಮೆಂಟ್ 2026 ಎಂದಿರುವ ಲಿಂಕ್ಸ್ ಮೇಲೆ ಕ್ಲಿಕ್ ಮಾಡಿ.
  • ನಂತರ, ಖಾಲಿ ಹುದ್ದೆಗಳ ಪಟ್ಟಿಯಲ್ಲಿ ನಿಮ್ಮ ರಾಜ್ಯ ಹಾಗೂ ಜಿಲ್ಲೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ನಂತರ ಅಪ್ಲೈ ಬಟನ್ ಅನ್ನು ಕ್ಲಿಕ್ ಮಾಡಿ.
  • ಆನ್ಲೈನ್ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಹಾಗೂ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಜೊತೆಗೆ ಮುಖ್ಯವಾಗಿ ಇಮೇಲ್ ಹಾಗೂ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ. ನೀವು ಹುದ್ದೆಗೆ ಆಯ್ಕೆಯಾಗಿರುವ ಬಗ್ಗೆ ಮಾಹಿತಿಯನ್ನು ಇದರ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.
  • ನಂತರ ಶೈಕ್ಷಣಿಕ ವಿವರ, UIDAI ನೀಡಲಾದ ಪ್ರಮಾಣ ಪತ್ರಗಳು ಹಾಗೂ ವೈಯಕ್ತಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಸರಿಯಾಗಿ ಓದಿಕೊಳ್ಳಿ.
  • ದಿನಾಂಕ 10-03-2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.

ಅರ್ಜಿ ಸಲ್ಲಿಸುವ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಈಗಾಗಲೇ ಆರಂಭಗೊಂಡಿದೆ (11-02-2026)
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2026

ಹುದ್ದೆಗೆ ಸಂಬಂಧಿಸಿದ ಲಿಂಕುಗಳು:

ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

CSC ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಆಧಾರ್ ಆಪರೇಟರ್ ಹಾಗೂ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.

ಯಾವುದೇ ಒಬ್ಬ ವ್ಯಕ್ತಿ ಉತ್ತಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಕೂಡ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಲು ವಿಫಲನಾಗುತ್ತಾನೆ. ಏಕೆಂದರೆ, ಅವನಿಗೆ ಉತ್ತಮ ಸಂವಹನ ಕೌಶಲ್ಯ ಇರುವುದಿಲ್ಲ ಹಾಗೂ ಉತ್ತಮ ನಿರ್ವಹಣಾ ಕೌಶಲ್ಯ ಇರುವುದಿಲ್ಲ. ಹಾಗಾಗಿ ಮೊದಲು ಸಣ್ಣ ಪುಟ್ಟ ಉದ್ಯೋಗವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸಂವಹನವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳಲು ಇದು ಉತ್ತಮ ಉದ್ಯೋಗವಾಗಿದೆ.

ನೀವು ಸಾರ್ವಜನಿಕರ ಸಮಸ್ಯೆಯನ್ನು ಆಲಿಸುವ ಮೂಲಕ, ಹಾಗೂ ಅವರಿಗೆ ಆಧಾರ್ ಸಂಬಂಧಿತ ಸೇವೆಗಳನ್ನು ಒದಗಿಸುವ ಮೂಲಕ ನಿಮ್ಮ ವೃತ್ತಿ ನೈಪುಣ್ಯತೆಯನ್ನು ವೃದ್ಧಿಸಿಕೊಳ್ಳಬಹುದು. ಹಾಗಾಗಿ ನೀವು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿ, ಉದ್ಯೋಗವಿಲ್ಲದೆ ಕುಳಿತಿರುವ ನಿಮ್ಮ ಸ್ನೇಹಿತರಿಗೂ ಈ ಹುದ್ದೆಯ ಕುರಿತು ಮಾಹಿತಿಯನ್ನು ನೀಡಿ ಅವರಿಗೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರೇರೇಪಣೆ ನೀಡಿ.

ಓದುಗರಲ್ಲಿ ವಿನಂತಿ,

ಕನ್ನಡಿಗ. ಆನ್ಲೈನ್ ವೆಬ್ ಸೈಟ್ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.

WhatsApp ನಲ್ಲಿ Kannadiga.online ಚಾನಲ್ ಫಾಲೋ ಮಾಡಿ:👇🏻👇🏻

https://chat.whatsapp.com/LCIau2hiQxV2RbnzfOXdK0

Read more

ದುಬೈನಲ್ಲಿ ಹೈ ಅಲರ್ಟ್! ಬುರ್ಜ್ ಖಲೀಫಾ ಖಾಲಿ, ಏರ್‌ಪೋರ್ಟ್ ಬಂದ್ ಸುದ್ದಿ – ನಿಜವೇ? ವದಂತಿಯೇ?

ದುಬೈನಲ್ಲಿ ಹೈ ಅಲರ್ಟ್! ಬುರ್ಜ್ ಖಲೀಫಾ ಖಾಲಿ, ಏರ್‌ಪೋರ್ಟ್ ಬಂದ್ ಸುದ್ದಿ – ನಿಜವೇ? ವದಂತಿಯೇ?

ದುಬೈನಲ್ಲಿ ಹೈ ಅಲರ್ಟ್‌! ಬುರ್ಜ್ ಖಲೀಫಾ ಖಾಲಿ? ಏರ್‌ಪೋರ್ಟ್ ಬಂದ್? ಮಧ್ಯಪ್ರಾಚ್ಯ ಉದ್ವಿಗ್ನತೆ ಹಿನ್ನೆಲೆ ಭಾರೀ ಆತಂಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಗಟ್ಟಿಯಾಗುತ್ತಿರುವಂತೆ ಜಾಗತಿಕ ಮಟ್ಟದಲ್ಲಿ ಆತಂಕವೂ …

Read more

ಇರಾನ್ ವಿರುದ್ಧ ಅಮೆರಿಕ ಸೇರಿ 7 ದೇಶಗಳ ಜಂಟಿ ಹೇಳಿಕೆ: “ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ”

Iran News, United States, Global Politics, Middle East Tension, Joint Statement, World News, International Relations, Breaking News, Geopolitics, Kannada News

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಮೆರಿಕದ ವಾಯನೆಲೆಗಳು, ಅಮೆರಿಕದ ರಾಯಭಾರ ಕಚೇರಿಗಳ ಮೇಲೆಲ್ಲ ದಾಳಿ ನಡೆಸಿದೆ. ಹೀಗಾಗಿ, …

Read more

Tabaahi Song: ಭಟ್ಟರ ಸಾಹಿತ್ಯದಲ್ಲಿ ಟಾಕ್ಸಿಕ್ ‘ತಬಾಹಿ’ ಸಾಂಗ್ ರಿಲೀಸ್! ಯಶ್ ಫ್ಯಾನ್ಸ್ ಫಿದಾ

Tabaahi Song: ಭಟ್ಟರ ಸಾಹಿತ್ಯದಲ್ಲಿ ಟಾಕ್ಸಿಕ್ ‘ತಬಾಹಿ’ ಸಾಂಗ್ ರಿಲೀಸ್! ಯಶ್ ಫ್ಯಾನ್ಸ್ ಫಿದಾ

Toxic Movie Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಬಿಡುಗಡೆಯಾಗಿದೆ. ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಿದೆ. ಈ ಚಿತ್ರದಲ್ಲಿ ಒಟ್ಟು …

Read more

ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್‌ನಲ್ಲಿ ರಣವೀರ್ ಸಿಂಗ್ ಸಿನಿಮಾಗೆ ಭರ್ಜರಿ ಮುನ್ನಡೆ!

ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್‌ನಲ್ಲಿ ರಣವೀರ್ ಸಿಂಗ್ ಸಿನಿಮಾಗೆ ಭರ್ಜರಿ ಮುನ್ನಡೆ!

ಬಿಡುಗಡೆಗೂ ಮುನ್ನವೇ ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ನಡುವೆ ಪೈಪೋಟಿ ಶುರುವಾಗಿದೆ. ಈ ಎರಡೂ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಮನೆಮಾಡಿದ್ದು, ಕಾತುರ ಹೆಚ್ಚಾಗಿದೆ. …

Read more

ಬಿಡುಗಡೆಗೆ 9 ತಿಂಗಳ ಮುಂಚೆಯೇ ‘ರಾಮಾಯಣ’ ಸಿನಿಮಾ ವಿಮರ್ಶೆ ವೈರಲ್! ಸತ್ಯವೇ? ಪಬ್ಲಿಸಿಟಿ ಸ್ಟಂಟ್ ಆ?

ಬಿಡುಗಡೆಗೆ 9 ತಿಂಗಳ ಮುಂಚೆಯೇ ‘ರಾಮಾಯಣ’ ಸಿನಿಮಾ ವಿಮರ್ಶೆ ವೈರಲ್! ಸತ್ಯವೇ? ಪಬ್ಲಿಸಿಟಿ ಸ್ಟಂಟ್ ಆ?

Ramayana movie: ಆಸ್ಕರ್ ವಿಜೇತ ಹಾಲಿವುಡ್​ ವಿಎಫ್​​ಎಕ್ಸ್ ಸಂಸ್ಥೆಯಾದ ಡಿಎನ್​​ಇಜಿಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಕತೆಯನ್ನು ಭಾರಿ ಅದ್ಧೂರಿಯಾಗಿ, ಇಡೀ ವಿಶ್ವವೇ ತಿರುಗಿ …

Read more

ಸಾಲಮನ್ನಾ 2026: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಬಿಡುಗಡೆ!

ಸಾಲಮನ್ನಾ 2026: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಬಿಡುಗಡೆ!

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಕನ್ನಡಿಗ. ಆನ್ಲೈನ್ ವೆಬ್ ಸೈಟ್ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಜಗತ್ತಿನ ಅತ್ಯಂತ ಕಠಿಣ ಕೆಲಸಗಳಲ್ಲಿ ಪ್ರಮುಖವಾದ ಕೆಲಸ ಎಂದರೆ ಅದು …

Read more

ನಿರ್ಮಾಣ ಕಾರ್ಮಿಕರೇ ಎಚ್ಚರ! ಕೆಲಸದ ವೇಳೆ ಬೂಟ್ ಧರಿಸದಿದ್ದರೆ ಗಂಭೀರ ಅಪಾಯ – ನಿಮ್ಮ ಪಾದರಕ್ಷೆ ನಿಮ್ಮ ಜೀವ ರಕ್ಷೆ

ನಿರ್ಮಾಣ ಕಾರ್ಮಿಕರೇ ಎಚ್ಚರ! ಕೆಲಸದ ವೇಳೆ ಬೂಟ್ ಧರಿಸದಿದ್ದರೆ ಗಂಭೀರ ಅಪಾಯ – ನಿಮ್ಮ ಪಾದರಕ್ಷೆ ನಿಮ್ಮ ಜೀವ ರಕ್ಷೆ

ಆತ್ಮೀಯ ಕಾರ್ಮಿಕರೇ ಬಾಂಧವರೇ, ತಮಗೆಲ್ಲ ಕನ್ನಡಿಗ. ಆನ್ಲೈನ್ ವೆಬ್ ಸೈಟ್ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.   Thank you for reading this post, don’t forget …

Read more

ರೈತರಿಗೆ ಭರ್ಜರಿ ಗಿಫ್ಟ್: ರಾಜ್ಯ ಸರ್ಕಾರದಿಂದ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್‌ಸೆಟ್ – ಅರ್ಜಿ ಪ್ರಕ್ರಿಯೆ ಶುರು!

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಕನ್ನಡಿಗ. ಆನ್ಲೈನ್ ವೆಬ್ ಸೈಟ್ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ಕರ್ನಾಟಕ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು …

Read more

SBI Recruitment 2026: 116 Specialist Cadre Officer ಹುದ್ದೆಗಳು ಖಾಲಿ – ವರ್ಷಕ್ಕೆ 50 ಲಕ್ಷ ರೂ.ವರೆಗೆ ವೇತನ!

SBI Recruitment 2026_ 116 Specialist Cadre Officer ಹುದ್ದೆಗಳು ಖಾಲಿ – ವರ್ಷಕ್ಕ_20260227_115820_0000

ಆತ್ಮೀಯ ಅಭ್ಯರ್ಥಿಗಳಿಗೆ ತಮಗೆಲ್ಲ ಕನ್ನಡಿಗ. ಆನ್ಲೈನ್ ವೆಬ್ಬೆಟ್ಟೆ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ Thank you for reading this post, don’t forget to subscribe!.. …

Read more