Telegram Join My Telegram WhatsApp Join My WhatsApp

BBK 12 Finale: ತಲೆಕೆಳಗಾಯ್ತು ಫಿನಾಲೆ ಲೆಕ್ಕಾಚಾರ: ಇಬ್ಬರಿಗೆ ಅತಿ ಹೆಚ್ಚು ವೋಟ್‌, ಟಾಪ್‌ ಸ್ಪರ್ಧಿಯ ವೋಟಿಂಗ್‌ ಸಂಖ್ಯೆ ರಿವೀಲ್

BBK 12 Finale: ತಲೆಕೆಳಗಾಯ್ತು ಫಿನಾಲೆ ಲೆಕ್ಕಾಚಾರ: ಇಬ್ಬರಿಗೆ ಅತಿ ಹೆಚ್ಚು ವೋಟ್‌, ಟಾಪ್‌ ಸ್ಪರ್ಧಿಯ ವೋಟಿಂಗ್‌ ಸಂಖ್ಯೆ ರಿವೀಲ್.

ಫಿನಾಲೆ ಹಂತದಲ್ಲಿರುವ ಕನ್ನಡ ಬಿಗ್‌ಬಾಸ್‌ ದಿನದಿಂದ ದಿನಕ್ಕೆ ರೋಚಕವಾಗುತ್ತಲೇ ಹೋಗುತ್ತಿದ್ದು, ಇದೀಗ ಸೀಸನ್‌-12 ವೋಟಿಂಗ್‌ ವಿಚಾರದಲ್ಲಿ ಇತಿಹಾಸವನ್ನೇ ಬರೆಯುವ ಹಂತಕ್ಕೆ ತಲುಪಿದೆ. ಇದುವರೆಗೆ ಯಾವುದೇ ಸೀಸನ್‌ನಲ್ಲಿ ಕಾಣದ ಮಟ್ಟಿಗೆ ಈ ಬಾರಿ ವೋಟಿಂಗ್‌ ನಡೆದಿದೆ ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಕಿಚ್ಚ ಸುದೀಪ್‌ ಬಹಿರಂಗಪಡಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌ಗೆ ಸುಮಾರು ಐದು ಕೋಟಿ ವೋಟ್‌ಗಳು ಲಭಿಸಿದ್ದವು. ಆದರೆ ಈ ಬಾರಿ ಅದನ್ನೆಲ್ಲ ಮೀರಿಸುವ ರೀತಿಯಲ್ಲಿ, ಒಬ್ಬ ಸ್ಪರ್ಧಿಗೆ ಬರೋಬ್ಬರಿ 37 ಕೋಟಿ ವೋಟ್‌ಗಳು ಈವರೆಗೆ ದಾಖಲಾಗಿವೆ ಎಂದು ಸುದೀಪ್‌ ಅಂಕಿಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಈ ಮಾತು ಕೇಳುತ್ತಿದ್ದಂತೆಯೇ ಮನೆ ಒಳಗಿರುವವರಿಗೂ, ಹೊರಗಿರುವ ಅಭಿಮಾನಿಗಳಿಗೂ ಶಾಕ್‌ ಆಗಿದೆ.

ಇಬ್ಬರ ನಡುವೆ ಫೈಟ್‌ ಪಕ್ಕಾ
ಇಲ್ಲಿಗೇ ಟ್ವಿಸ್ಟ್‌ ಮುಗಿಯಲ್ಲ! ಈ ಬಾರಿ ಇಬ್ಬರು ಸ್ಪರ್ಧಿಗಳಿಗೆ ಅತಿ ಹೆಚ್ಚು ವೋಟ್‌ಗಳು ಬಂದಿದ್ದು, ಅವರಿಬ್ಬರ ನಡುವಿನ ಮತಗಳ ಅಂತರವೂ ಅತೀ ಕಡಿಮೆ ಎಂದು ಹೇಳುವ ಮೂಲಕ ಸುದೀಪ್‌ ಫಿನಾಲೆಗೆ ಭಾರೀ ತಿರುವು ನೀಡಿದ್ದಾರೆ. ಅಂದರೆ, ಕೊನೆಯ ಕ್ಷಣದವರೆಗೆ ಯಾರು ಟ್ರೋಫಿ ಹಿಡಿಯುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಈ ಅಂಕಿಅಂಶಗಳನ್ನು ಕೇಳಿ ಫಿನಾಲೆಗೆ ಪ್ರವೇಶಿಸಿರುವ ಗಿಲ್ಲಿ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಘು ಮತ್ತು ಧನುಷ್‌ ಗೌಡ ಎಲ್ಲರೂ ಅಚ್ಚರಿಗೊಂಡರು. ಕೆಲವರ ಮುಖದಲ್ಲಿ ಆತ್ಮವಿಶ್ವಾಸ, ಕೆಲವರಲ್ಲಿ ಕುತೂಹಲ, ಇನ್ನೂ ಕೆಲವರಲ್ಲಿ ನರ್ವಸ್‌, ನಗು ಎಲ್ಲವೂ ಕಾಣಿಸಿಕೊಂಡಿತು. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಫಿನಾಲೆಯ ಉತ್ಸಾಹವಂತೂ ಹೆಚ್ಚಾಗಿದೆ.

37+ ಕೋಟಿ ವೋಟುಗಳು!! {374911299}…

ಬಿಗ್ ಬಾಸ್ | ಪ್ರೀ ಗ್ರಾಂಡ್ ಫಿನಾಲೆ, ಇಂದು ರಾತ್ರಿ 9#BiggBossKannada12 #BBK12 #ಪ್ರೀಗ್ರಾಂಡ್‌ಫಿನಾಲೆ #PreGrandFinale #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/IEBFPS5yun

— Colors Kannada (@ColorsKannada) January 18, 01, 2026

ಈ ಅಂಕಿಅಂಶಗಳು ನಿನ್ನೆವರೆಗಿನ ವೋಟಿಂಗ್‌ ಮಾಹಿತಿ ಮಾತ್ರವಾಗಿದ್ದು, ಭಾನುವಾರ ನಡೆಯಲಿರುವ ಫಿನಾಲೆ ವೇಳೆಗೆ ವೋಟ್‌ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಭಿಮಾನಿಗಳ ಬೆಂಬಲ, ಸೋಷಿಯಲ್‌ ಮೀಡಿಯಾ ಹವಾ, ಕೊನೆಯ ಕ್ಷಣದ ವೋಟಿಂಗ್‌ ಎಲ್ಲವೂ ಸೇರಿ ಬಿಗ್‌ಬಾಸ್‌ ಸೀಸನ್‌-12 ಫಿನಾಲೆಯನ್ನು ಅತೀ ರೋಚಕವನ್ನಾಗಿಸಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌-12 ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇದೀಗ ವೋಟಿಂಗ್‌ ವಿಚಾರದಲ್ಲಿ ಇಡೀ ಟೆಲಿವಿಷನ್‌ ಲೋಕವೇ ಬೆರಗಾಗುವ ಹಂತಕ್ಕೆ ತಲುಪಿದೆ. ಕಳೆದ ಎಲ್ಲ ಸೀಸನ್‌ಗಳ ದಾಖಲೆಗಳನ್ನು ಮುರಿದಿರುವ ಈ ಬಾರಿ ವೋಟಿಂಗ್‌ ಪ್ರಮಾಣ, ಫಿನಾಲೆಗೂ ಮುನ್ನವೇ ಅಭಿಮಾನಿಗಳ ಕುತೂಹಲವನ್ನು ಗಗನಕ್ಕೇರಿಸಿದೆ.

ಸುದೀಪ್‌ ಅವರು ಇನ್ನೊಂದು ಮಹತ್ವದ ಟ್ವಿಸ್ಟ್‌ ಕೂಡ ನೀಡಿದ್ದು, ಈ ಬಾರಿ ಇಬ್ಬರು ಸ್ಪರ್ಧಿಗಳಿಗೆ ಅತಿ ಹೆಚ್ಚು ವೋಟ್‌ಗಳು ಬಂದಿವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಇಬ್ಬರ ನಡುವಿನ ಮತಗಳ ಅಂತರವೂ ಅತ್ಯಂತ ಕಡಿಮೆ ಎಂದು ಹೇಳುವ ಮೂಲಕ ಫಿನಾಲೆಯನ್ನು ಸಂಪೂರ್ಣವಾಗಿ ಓಪನ್‌ ಮಾಡಿದ್ದಾರೆ. ಅಂದರೆ, ಕೊನೆಯ ಕ್ಷಣದಲ್ಲಿ ಒಂದು ವೋಟ್‌ ಕೂಡ ಫಲಿತಾಂಶವನ್ನು ತಿರುವುಮಾಡುವಷ್ಟು ಪೈಪೋಟಿ ನಡೆಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆ.
ಈಗ ಎಲ್ಲರನ್ನೂ ಕಾಡುತ್ತಿರುವ ಒಂದೇ ಪ್ರಶ್ನೆ ಎಂದರೆ, 37 ಕೋಟಿ ವೋಟ್‌ ಪಡೆದ ಆ ಸ್ಪರ್ಧಿ ಯಾರು? ಅತಿ ಕಡಿಮೆ ಅಂತರದಲ್ಲಿ ಪೈಪೋಟಿ ನೀಡುತ್ತಿರುವ ಇನ್ನೊಬ್ಬರು ಯಾರು? ಎಂಬುದಾಗಿದೆ. ಉತ್ತರಕ್ಕೆ ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆಗಾಗಿ ಇನ್ನೇನು ಕಣ್ಣು ಹಾಯಿಸಿ ಕಾಯಬೇಕಷ್ಟೇ…

Leave a Comment