Telegram Join My Telegram WhatsApp Join My WhatsApp

“ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ!” – ಟ್ರಂಪ್ ಹೊಸ ಹೇಳಿಕೆ ಸದ್ದು.

ಟ್ರಂಪ್ ಮತ್ತೊಮ್ಮೆ ಭಾರತ ಮತ್ತು ಪಾಕ್ ವಿಚಾರ ಪ್ರಸ್ತಾಪಿಸಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. 2025ರಲ್ಲಿ ಉಭಯ ದೇಶಗಳ ನಡುವೆ ನಡೆದಿದ್ದ ಸೇನಾ ಸಂಘರ್ಷವನ್ನುನಿಲ್ಲಿಸಿದ್ದು ನಾನೇ ಎಂದು ಬೀಗಿರುವ ಟ್ರಂಪ್, ಇದಕ್ಕಾಗಿ ತಾವು ಭಾರತ ಮತ್ತು ಪಾಕಿಸ್ತಾನಕ್ಕೆ ಆರ್ಥಿಕ ಬೆದರಿಕೆ ಹಾಕಿದ್ದೆ ಎಂದಿದ್ದಾನೆ.

  • ತುಂಬಿದ ಸಭೆಯಲ್ಲಿ ಪಾಕ್ ಪ್ರಧಾನಿಗೆ ಅವಮಾನ
  • ಹಣ ಕಳೆದುಕೊಳ್ಳುವ ಭಯದಿಂದ ಯುದ್ಧ ನಿಲ್ಲಿಸಿದರು
  • ಡೊನಾಲ್ಡ್ ಟ್ರಂಪ್ ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆ
  • ಮಧ್ಯಸ್ಥಿಕೆಯಿಂದಾಗಿ 2.5 ಕೋಟಿ ಜನರ ಪ್ರಾಣ ಉಳಿಯಿತು

🇺🇸 Donald Trump ಮತ್ತೆ ವಿವಾದಾತ್ಮಕ ಹೇಳಿಕೆ: “ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ!”

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಉಂಟಾಗುವ ಪರಿಸ್ಥಿತಿ ಬಂದಾಗ ಅದನ್ನು ತಾನೇ ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

“ನಾನು ಮಧ್ಯಸ್ಥಿಕೆ ಮಾಡಿರಲಿಲ್ಲ ಅಂದರೆ, ಎರಡು ದೇಶಗಳ ಮೇಲೂ 200% ಟ್ಯಾಕ್ಸ್ ಹಾಕುತ್ತಿದ್ದೆ” ಎಂದು ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಏನು ಹೇಳಿದ್ದಾರೆ ಟ್ರಂಪ್?

  • ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು

  • ಅದನ್ನು ತಾನೇ ನಿಲ್ಲಿಸಿದ್ದೇನೆ ಎಂದು ದಾವೆ

  • ಇಲ್ಲದಿದ್ದರೆ 200% ತೆರಿಗೆ ವಿಧಿಸುತ್ತಿದ್ದೆ ಎಂದು ಎಚ್ಚರಿಕೆ

ಈ ಹೇಳಿಕೆ ಯಾವ ಸಮಯದ ಘಟನೆಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಬಗ್ಗೆ ಟ್ರಂಪ್ ಇದಕ್ಕೂ ಮುಂಚೆಯೂ ಹಲವು ಬಾರಿ ಹೇಳಿಕೆ ನೀಡಿದ್ದರು.

ರಾಜಕೀಯ ಪ್ರತಿಕ್ರಿಯೆ ಏನು?

ಭಾರತೀಯ ರಾಜಕೀಯ ವಲಯದಲ್ಲಿ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು “ಚುನಾವಣೆ ಪ್ರಚಾರದ ಭಾಗ” ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಟ್ರಂಪ್ ಹೇಳಿಕೆಗೆ ಅಧಿಕೃತ ದಾಖಲೆಗಳಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನದ ವಿಚಾರ ಪ್ರಸ್ತಾಪಿಸಿ ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. 2025ರಲ್ಲಿ ಉಭಯ ದೇಶಗಳ ನಡುವೆ ನಡೆದಿದ್ದ ಸೇನಾ ಸಂಘರ್ಷವನ್ನು (Military Standoff) ನಿಲ್ಲಿಸಿದ್ದು ನಾನೇ ಎಂದು ಬೀಗಿರುವ ಟ್ರಂಪ್, ಇದಕ್ಕಾಗಿ ತಾವು ಭಾರತ ಮತ್ತು ಪಾಕಿಸ್ತಾನಕ್ಕೆ ಆರ್ಥಿಕ ಬೆದರಿಕೆ ಹಾಕಿದ್ದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ (Board of Peace) ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ತಮ್ಮ ಮಧ್ಯಸ್ಥಿಕೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಟ್ರಂಪ್ ಹೇಳಿದ್ದೇನು?

‘ನನಗೆ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ನಾಯಕರು ಚೆನ್ನಾಗಿ ಪರಿಚಯ. ಯುದ್ಧ ನಡೆಯುತ್ತಿದ್ದಾಗ ಇಬ್ಬರಿಗೂ ಕರೆ ಮಾಡಿದೆ. ನೋಡಿ, ನೀವಿಬ್ಬರೂ ಜಗಳ ನಿಲ್ಲಿಸದಿದ್ದರೆ, ನಾನು ನಿಮ್ಮ ದೇಶಗಳ ಮೇಲೆ 200% ಸುಂಕ (Tariff) ವಿಧಿಸುತ್ತೇನೆ. ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ಎಚ್ಚರಿಸಿದೆ. ಹಣ ಕಳೆದುಕೊಳ್ಳುವ ಭಯದಿಂದ ತಕ್ಷಣವೇ ಯುದ್ಧ ನಿಲ್ಲಿಸಿದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

11 ಜೆಟ್ ವಿಮಾನಗಳು ಪತನವಂತೆ

ವಿಷಯವನ್ನು ಮತ್ತಷ್ಟು ಉತ್ಪ್ರೇಕ್ಷೆ ಮಾಡಿದ ಟ್ರಂಪ್, ಆ ಯುದ್ಧದಲ್ಲಿ ಬರೋಬ್ಬರಿ 11 ದುಬಾರಿ ಯುದ್ಧ ವಿಮಾನಗಳನ್ನು (Jets) ಹೊಡೆದುರುಳಿಸಲಾಗಿತ್ತು. ನನ್ನ ಮಧ್ಯಸ್ಥಿಕೆಯಿಂದಾಗಿ ಸುಮಾರು 2.5 ಕೋಟಿ ಜನರ ಪ್ರಾಣ ಉಳಿಯಿತು ಎಂದಿದ್ದಾರೆ. ವಿಶೇಷವೆಂದರೆ ಈ ಹಿಂದೆ 7 ವಿಮಾನಗಳು ಪತನವಾಗಿದ್ದವು ಮತ್ತು 1 ಕೋಟಿ ಜನರ ಪ್ರಾಣ ಉಳಿಸಿದ್ದೆ ಎಂದಿದ್ದರು. ಈಗ ಆ ಸಂಖ್ಯೆಯನ್ನು ಏರಿಸಿದ್ದಾರೆ!

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಮುಜುಗರ

ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಉಪಸ್ಥಿತರಿದ್ದರು. ಭಾಷಣದ ಮಧ್ಯೆ ಟ್ರಂಪ್, ‘ಭಾರತ ಮತ್ತು ಪಾಕಿಸ್ತಾನದ ವಿಚಾರ ದೊಡ್ಡದು. ಷರೀಫ್ ಅವರೇ, ದಯವಿಟ್ಟು ಒಂದೇ ಒಂದು ಸೆಕೆಂಡ್ ಎದ್ದು ನಿಲ್ಲಿ’ ಎಂದು ಆದೇಶಿಸುವ ಧಾಟಿಯಲ್ಲಿ ಹೇಳಿದರು. ಷರೀಫ್ ಎದ್ದು ನಿಲ್ಲುತ್ತಿದ್ದಂತೆಯೇ, ‘ನಾನು 2.5 ಕೋಟಿ ಜನರ ಪ್ರಾಣ ಉಳಿಸಿದೆ ಎಂದು ನೀವೇ ಹೇಳಿಕೆ ನೀಡಿದ್ದಿರಿ, ಧನ್ಯವಾದಗಳು’ ಎಂದು ಟ್ರಂಪ್ ನೆನಪಿಸಿದರು. ಎಲ್ಲರ ಮುಂದೆ ಟ್ರಂಪ್ ಹೀಗೆ ಮಾಡಿದ್ದು ಷರೀಫ್‌ಗೆ ಮುಜುಗರ ತಂದಿಟ್ಟಿತು.

ಭಾರತದ ಸ್ಪಷ್ಟನೆ ಏನು?

ಟ್ರಂಪ್​ನ ಈ ಎಲ್ಲಾ ವಾದಗಳನ್ನು ಭಾರತ ಸತತವಾಗಿ ತಳ್ಳಿಹಾಕಿದೆ. 2025ರ ಮೇ ತಿಂಗಳಲ್ಲಿ ನಡೆದ ಸಂಘರ್ಷದ ವೇಳೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ. ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ (Operation Sindoor) ಬಳಿಕ ಎರಡೂ ದೇಶಗಳ ಮಿಲಿಟರಿ ಆಪರೇಷನ್ ಡೈರೆಕ್ಟರ್ ಜನರಲ್ (DGMOs) ಮಟ್ಟದ ನೇರ ಮಾತುಕತೆಯಿಂದ ಕದನ ವಿರಾಮ ಏರ್ಪಟ್ಟಿತ್ತು ಎಂದು ಭಾರತ ಸ್ಪಷ್ಟಪಡಿಸಿದೆ. ಟ್ರಂಪ್ ಹೇಳುತ್ತಿರುವಂತೆ 11 ವಿಮಾನಗಳು ಪತನವಾಗಿಲ್ಲ ಎಂಬುದನ್ನು ಭಾರತೀಯ ಮೂಲಗಳು ದೃಢಪಡಿಸಿವೆ.

 

Leave a Comment