ರೈಲು ತಡವಾಗಿ ಬಂದ ಕಾರಣ ಪರೀಕ್ಷೆ ಬರೆಯಲಾಗದೇ ಒಂದು ಸಂಪೂರ್ಣ ವರ್ಷ ಕಳೆದುಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ, ಕೊನೆಗೂ ನ್ಯಾಯ ದೊರೆತಿದೆ.
2018ರಲ್ಲಿ ಲಕ್ನೋದಲ್ಲಿ ನಡೆದ ಮಹತ್ವದ ಎಂಟ್ರನ್ಸ್ ಪರೀಕ್ಷೆ ಬರೆಯಲು ಹೊರಟಿದ್ದ ಸಮೃದ್ಧಿ ಎಂಬ ವಿದ್ಯಾರ್ಥಿನಿ, ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ ಪರೀಕ್ಷೆಯ ದಿನವೇ ಅವರ ರೈಲು ಬರೋಬ್ಬರಿ 2.5 ಗಂಟೆ ತಡವಾಗಿ ಬಂದಿತು.
ಈ ವಿಳಂಬದಿಂದ ಸಮೃದ್ಧಿಗೆ ಪರೀಕ್ಷಾ ಕೇಂದ್ರ ತರೈಲುಲುಪಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಒಂದು ಅಮೂಲ್ಯ ವರ್ಷದ ಅವಕಾಶವೇ ಕೈ ತಪ್ಪಿತು. ಇದರಿಂದ ಮಾನಸಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಭಾರೀ ನಷ್ಟ ಉಂಟಾಯಿತು ಎಂದು ಅವರು ದೂರಿದರು.
ಇದನ್ನು ಸುಮ್ಮನೆ ಬಿಟ್ಟು ಬಿಡದ ಸಮೃದ್ಧಿ, ಭಾರತೀಯ ರೈಲ್ವೆ ವಿರುದ್ಧ 7 ವರ್ಷಗಳ ದೀರ್ಘ ಕಾನೂನು ಹೋರಾಟ ನಡೆಸಿದರು. ಕೊನೆಗೂ ಗ್ರಾಹಕ ಆಯೋಗವು ಪ್ರಕರಣವನ್ನು ಪರಿಶೀಲಿಸಿ, ಇದು ಸ್ಪಷ್ಟವಾಗಿ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಎಂದು ತೀರ್ಮಾನಿಸಿತು.
ವಿದ್ಯಾರ್ಥಿನಿಯ ಭವಿಷ್ಯಕ್ಕೆ ಆಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡ ಆಯೋಗ, ಭಾರತೀಯ ರೈಲ್ವೆಗೆ ₹9.10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಈ ತೀರ್ಪು, ಸಾರ್ವಜನಿಕ ಸೇವೆಗಳಲ್ಲಿ ನಿರ್ಲಕ್ಷ್ಯ ನಡೆದರೆ ಅದರ ಪರಿಣಾಮಗಳಿಗೆ ಸರ್ಕಾರದ ಇಲಾಖೆಗಳೂ ಹೊಣೆಗಾರರಾಗಬೇಕಾಗುತ್ತದೆ ಎಂಬುದಕ್ಕೆ ಮಹತ್ವದ ಉದಾಹರಣೆಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯ ವ್ಯವಸ್ಥೆ ಎಷ್ಟು ಗಂಭೀರವಾಗಿದೆ ಎಂಬುದನ್ನೂ ಈ ಪ್ರಕರಣ ತೋರಿಸಿದೆ..
ಈ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ kannadiga.online ವೆಬ್ಸೈಟ್ ಗೆ ಭೇಟಿ ನೀಡಿ…